ಸೆಂಚುರಿಯನ್: ಇಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 6 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯನ್ನು ಸಾಧಿಸಿದೆ.
ಟೀಂ ಇಂಡಿಯಾ ಸ್ಪಿನ್ ದಾಳಿಗೆ ದಂಗುಬಡಿದ ದಕ್ಷಿಣ ಆಫ್ರಿಕಾ ಆಟಗಾರರು ಕೇವಲ 118 ರನ್ ಗಳಿಗೆ ಅಲೌಟ್ ಆಗಿ ಪೆವೆಲಿಯನ್ ಪರೇಡ್ ನಡೆಸಿದರು. ಭಾರತದ ಪರ ಸ್ಪಿನ್ ಮಾಂತ್ರಿಕದ್ವಯರಾದ ಯಜುವೇಂದ್ರ ಚಹಲ್ (22/5) ಹಾಗೂ ಕುಲ್ದೀಪ್ ಯಾದವ್ (20/3) ವಿಕೆಟ್ ಪಡೆದು ಭಾರತ ಗೆಲುವಿಗೆ ಕಾರಣರಾದರು. ಇನ್ನುಳಿದಂತೆ ಭುವನೇಶ್ವರ್ ಕುಮಾರ್ ಹಾಗೂ ಬುಮ್ರಾ ತಲಾ ಒಂದು ವಿಕೆಟ್ ಪಡೆದರು.
Advertisement
Advertisement
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ನಡೆಸಲು ನಿರ್ಧರಿಸಿದ್ದ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ನಿರ್ಧಾರವನ್ನು ಬೌಲರ್ ಗಳು ಸಮರ್ಥಿಸುವ ಹಾಗೇ ಪ್ರದರ್ಶನ ನೀಡಿದರು. ನಂತರ ಸುಲಭದ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಬಹುಬೇಗ ಆರಂಭಿಕ ಆಟಗಾರರ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಮತ್ತೊಂದೆಡೆ ಬಿರುಸಿನ ಆಟ ಪ್ರದರ್ಶಿಸಿದ ಶಿಖರ್ ಧವನ್ ಆಕರ್ಷಕ 9 ಬೌಂಡರಿಗಳ ನೆರವಿನಿಂದ ಅರ್ಧ ಶತಕ (51) ದಾಖಲಿಸಿದರು. ನಂತರ ಬ್ಯಾಟಿಂಗ್ ಬಂದ ಕೊಹ್ಲಿ (46) ಧವನ್ ಜೊತೆ ಗೂಡಿ 20.3 ಓವರ್ ಗಳಲ್ಲಿ ತಂಡವನ್ನು ಗೆಲುವಿನ ಗುರಿ ತಲುಪಿದರು.
Advertisement
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಆಟಗಾರರು ಉತ್ತಮ ಆರಂಭವನ್ನು ಪಡೆದರು. ಆರಂಭಿಕ ಜೋಡಿಯಾದ ಹಾಶೀಮ್ ಆಮ್ಲಾ (23) ಹಾಗೂ ಕ್ವಿಂಟನ್ ಡಿ ಕಾಕ್ (20) 39 ರನ್ ಜೊತೆ ಆಟವಾಡಿ ಉತ್ತಮ ಆರಂಭ ನೀಡಿದರು.
Advertisement
ಸ್ಪಿನ್ ಮೋಡಿ: ಈ ವೇಳೆ ಬೌಲಿಂಗ್ ದಾಳಿ ನಡೆಸಿದ ವೇಗಿ ಭುವನೇಶ್ವರ್ ಕುಮಾರ್ ಆಮ್ಲಾರನ್ನು ಬಲಿ ಪಡೆದರು. ಬಳಿಕ ಭಾರತ ಸ್ಪಿನ್ ದಾಳಿಗೆ ಸಿಲುಕಿ ಆಫ್ರಿಕಾ ಆಟಗಾರರು 51 ರನ್ ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡರು. ಬಳಿಕ ಕ್ರಿಸ್ ಗೆ ಆಗಮಿಸಿದ ಜೆಪಿ ಡ್ಯುಮಿನಿ (25) ಹಾಗೂ ಜೊಂಡೊ (25) ತಂಡದ ಮೊತ್ತವನ್ನು ಮೂರಂಕಿ ದಾಟಿಸಲು ನೆರವಾದರು. ಆದರೆ ಇಬ್ಬರನ್ನು ಬಲಿ ಪಡೆದ ಚಹಲ್ ಕೆರಿಬಿಯನ್ ಪಡೆಗೆ ಆಘಾತ ನೀಡಿದರು. ಬಳಿಕ ಬಂದ ಮೊರ್ನೆ ಮಾರ್ಕೆಲ್ (1), ಇಮ್ರಾನ್ ತಾಹಿರ್ (0) ಕ್ರಿಸ್ ಮೊರಿಸ್ (14) ಬಂದಷ್ಟೇ ವೇಗದಲ್ಲಿ ಪೆವಲಿಯನ್ ಸೇರಿದರು.
ಟೀಂ ಇಂಡಿಯಾ ಪರ 22 ರನ್ ಗೆ 5 ವಿಕೆಟ್ ಪಡೆದು ಜೀವನಶ್ರೇಷ್ಠ ಸಾಧನೆ ಮಾಡಿದ ಚಹಲ್ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರು.
For the first time in 9 years South Africa are playing an ODI without AB de Villiers and Faf du Plessis. Last: v Aus, MCG, Jan 2009.
Result: All-out for their lowest ever total at home. #SAvInd
— Bharath Seervi (@SeerviBharath) February 4, 2018
ಗಾಯದ ಬರೆ: ಕಳೆದ 9 ವರ್ಷದ ಬಳಿಕ ದಕ್ಷಿಣ ಆಫ್ರಿಕಾ ತಂಡ ಎಬಿ ಡೆವಿಲಿಯರ್ಸ್ ಹಾಗೂ ಡೂಪ್ಲೆಸಿಸ್ ಆಟಗಾರರಿಲ್ಲದೇ ಏಕದಿನ ಪಂದ್ಯವನ್ನು ಆಡಿದೆ. 2009 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಇಬ್ಬರು ಆಟಗಾರರು ಇಲ್ಲದೇ ಆಫ್ರಿಕಾ ತಂಡ ಕಣಕ್ಕೆ ಇಳಿದಿತ್ತು. ಈ ಪಂದ್ಯದಲ್ಲಿ 119 ರನ್ ಅತ್ಯಲ್ಪ ಮೊತ್ತ ಗಳಿಸಿ ಸೋಲು ಪಡೆದಿತ್ತು.
Chahal's 5 for 22 are the second-best figures by a spinner in South Africa.
Only Nicky Boje's 5/21 v Aus, Cape Town, 2002 is better. #SAvInd
— Bharath Seervi (@SeerviBharath) February 4, 2018
118 is South Africa's lowest total in ODIs at home.
Prev: 119 v Eng, PE, 2009. #SAvInd
— Bharath Seervi (@SeerviBharath) February 4, 2018